ಅನೇಕ ಮಹಿಳೆಯರಿಗೆ ಸ್ತನದ ತೊಟ್ಟು ಡಾರ್ಕ್ ಆಗಿದ್ದರೆ ಕಾರಣ ಇದೆ ನೋಡಿ.

ಸ್ತನದ ತೊಟ್ಟು ಮತ್ತು ಅರಿಯೊಲಾಗಳ ಬಣ್ಣ ಸಾಮಾನ್ಯವಾಗಿ ನಿಮ್ಮ ಚರ್ಮದ ಬಣ್ಣಕ್ಕಿಂತ ಡಾರ್ಕ್ ಆಗಿರುತ್ತದೆ. ಕೆಲವು ಮಹಿಳೆಯರ ಸ್ತನದ ತೊಟ್ಟು ಡಾರ್ಕ್ ಅಥವಾ ಬ್ರೌನ್ ಬಣ್ಣದ್ದಾಗಿರಬಹುದು. ಇನ್ನು ಕೆಲವು  ಮಹಿಳೆಯರ ಸ್ತನದ ತೊಟ್ಟುಗಳ ಬಣ್ಣ ಗುಲಾಬಿ ಅಥವಾ ಕೆಂಪು ಬಣ್ಣದ್ದಾಗಿರಬಹುದು, ಆದರೆ ಅರಿಯೊಲಾಗಳು ಮಾತ್ರ ಒಂದೇ ಬಣ್ಣದಲ್ಲಿರಬಹುದು.

ಸ್ತನದ ತೊಟ್ಟು ಅಥವಾ ಅರಿಯೊಲಾಗಳು ಲೈಂಗಿಕ ಉತ್ಸಾಹದಿಂದ ಹೆಚ್ಚಾಗಿ ಡಾರ್ಕ್ ಆಗುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ, ಸ್ತನದ ತೊಟ್ಟು ಡಾರ್ಕ್ ನಿಂದ ಕಪ್ಪು ಬಣ್ಣಕ್ಕೆ ತಿರುಗಿದಾಗ, ಸ್ತನ್ಯಪಾನ, ಹಾರ್ಮೋನುಗಳ ಏರಿಳಿತ, ಗರ್ಭಧಾರಣೆ, ಸ್ತನದ ತೊಟ್ಟುಗಳ ಸುತ್ತ ಕೂದಲು ಇತ್ಯಾದಿ ಕೆಲವು ಕಾರಣಗಳಿಂದಾಗಿರಬಹುದು.

ಇದ್ದಕ್ಕಿದ್ದಂತೆ ಸ್ತನದ ತೊಟ್ಟು ಡಾರ್ಕ್ ಆಗುವುದು ಮೊದಲಿಗೆ ಆತಂಕವನ್ನುಂಟುಮಾಡುತ್ತದೆ, ಹೀಗಾದಾಗ ನೀವು ಪ್ಯಾನಿಕ್ ಆಗಬೇಡಿ. ಆದ್ದರಿಂದ ವೈದ್ಯರು ಸ್ತನದ ತೊಟ್ಟು ಡಾರ್ಕ್ ಆಗಲು ಕಾರಣ ಏನು ಅಂತ ತಿಳಿಸಿದ್ದಾರೆ ಓದಿ.

ಗರ್ಭಧಾರಣೆ:
ಗರ್ಭಾವಸ್ಥೆಯಲ್ಲಿ ಸ್ತನದ ತೊಟ್ಟಿನ ಗಾತ್ರ, ಬಣ್ಣ ಮತ್ತು ವಿನ್ಯಾಸವು ತೀವ್ರವಾಗಿ ಬದಲಾಗುತ್ತದೆ. ಮಹಿಳೆ ಗರ್ಭಿಣಿಯಾದಾಗ ಮಗುವಿನ ಜನನಕ್ಕೆ ದೇಹವು ಸಿದ್ಧವಾಗುತ್ತದೆ, ಆದ್ದರಿಂದ ಸ್ತನವು ಮಗುವಿಗೆ ಹಾಲು ಉತ್ಪಾದಿಸಲು ಸಹಾಯ ಮಾಡುವ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಅನ್ನು ಹೆಚ್ಚು ಉತ್ಪಾದಿಸುತ್ತದೆ. ಈ ಹಾರ್ಮೋನುಗಳಿಂದಾಗಿ ಸ್ತನದ ತೊಟ್ಟುಗಳಲ್ಲಿ ಕೆಲವು ಬದಲಾವಣೆಗಳಾಗುತ್ತವೆ ಮತ್ತು ಸ್ತನದ ತೊಟ್ಟುಗಳು ಡಾರ್ಕ್ ಆಗಬಹುದು. ನೀವು ಗರ್ಭಿಣಿಯಾದಾಗ ಆರನೇ ತಿಂಗಳಲ್ಲಿ, ನಿಮ್ಮ ಸ್ತನಗಳು ಕೊಲಸ್ಟ್ರಮ್ ಅನ್ನು ಉತ್ಪಾದಿಸಲು ಆರಂಭಿಸಬಹುದು.

ಸ್ತನ ಕ್ಯಾನ್ಸರ್:
ಕೆಲವು ಸಂದರ್ಭಗಳಲ್ಲಿ ಸ್ತನದ  ತೊಟ್ಟುಗಳ ನೋಡಲು ಅಥವಾ ಗಾತ್ರದಲ್ಲಿನ ಬದಲಾವಣೆಯು ಸ್ತನ ಕ್ಯಾನ್ಸರ್ ನಂತಹ ಆರೋಗ್ಯ ಸಮಸ್ಯೆಗಳ ಸಂಕೇತವಾಗಿದೆ. ಇದು ಸ್ತನದ ತೊಟ್ಟನ್ನು ಡಾರ್ಕ್ ಮಾಡುವುದರ ಜೊತೆಗೆ ಸ್ತನ ಉಂಡೆಯಾದಂತೆ ಕಾಣುವುದು. ಹೀಗೆ ಬಹಳಷ್ಟು ಬದಲಾವಣೆಗಳು ಉಂಟಾಗುವುದನ್ನು ನಾವು ಕಾಣಬಹುದು.

ಸ್ತನ್ಯಪಾನ:
ಇದು ಸ್ತನದ ತೊಟ್ಟು ಕಪ್ಪಾಗುವುದಕ್ಕೆ ಇನ್ನೊಂದು ಕಾರಣ. ನೀವು ಸ್ತನ್ಯಪಾನ ಮಾಡುವಾಗ, ನಿಮ್ಮ ಸ್ತನಗಳು ಬಣ್ಣವನ್ನು ಬದಲಾಯಿಸಬಹುದು. ಆದರೆ ಡಾರ್ಕ್ ಬಣ್ಣವು ಹಾಲು ಉತ್ಪಾದನೆಗೆ ಅಗತ್ಯವಾದ ಹಾರ್ಮೋನುಗಳ ಏರಿಳಿತಗಳಿಂದಾಗಿರಬಹುದು.

ಪ್ರೌಢವಸ್ಥೆ:
ನೀವು ಊಹಿಸುವಂತೆ ಈ ಸಮಯದಲ್ಲಿ ಬಹುಶಃ ಎಲ್ಲಾ ಹಾರ್ಮೋನುಗಳ ಏರಿಳಿತದ ಕಾಣವಿರಬಹುದ. ಪ್ರೌಢವಸ್ಥೆಯಲ್ಲಿ ಸ್ತನದ ತೊಟ್ಟು ಡಾರ್ಕ್ ಆಗುವುದನ್ನು ನೀವು ಮೊದಲು ಗಮನಿಸಬಹುದು. ಪ್ರೌಢವಸ್ಥೆಯಲ್ಲಿ ಈಸ್ಟ್ರೊಜೆನ್ ಮಟ್ಟವು ಹೆಚ್ಚಾಗುತ್ತದೆ ಮತ್ತು ಹಾರ್ಮೋನ್ ಏರಿಳಿತದಿಂದಾಗಿ ನಿಮ್ಮ ಸ್ತನ ಬೆಳೆಯುತ್ತದೆ. ಆ ಸಮಯದಲ್ಲಿ, ನೀವು ಡಾರ್ಕ್ ಸ್ತನದ ತೊಟ್ಟು ನೋಡುವ ಸಾಧ್ಯತೆಯಿದೆ.

ಗರ್ಭನಿರೋಧಕ:
ಇದು ಅನಗತ್ಯ ಗರ್ಭಧಾರಣೆಯನ್ನು ತಡೆಯುತ್ತದೆ. ಇದು ದೇಹದ ಮೇಲೂ ಪರಿಣಾಮ ಬೀರಬಹುದು. ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟಗಳು ಹೆಚ್ಚಾದಾಗ, ಸ್ತನದ ತೊಟ್ಟುಗಳಲ್ಲಿ ಬದಲಾವಣೆಗಳನ್ನು ಕಾಣಬಹುದು. 

ಮುಟ್ಟು:
ಪಿರಿಯಡ್ಸ್ ಸಮಯದಲ್ಲಿ ನಿಮ್ಮ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟಗಳು ಹೆಚ್ಚಾಗುತ್ತವೆ. ಈ ಹಾರ್ಮೋನ್ ಏರಿಳಿತಗಳು ಡಾರ್ಕ್ ಬಣ್ಣದ ಸ್ತನದ ತೊಟ್ಟುಗಳಿಗೆ ಮತ್ತು ಸ್ತನ ನೋವಿಗೆ ಕಾರಣವಾಗಬಹುದು. ಕೆಲವು ಮಹಿಳೆಯರು ತಮ್ಮ ಸ್ತನದ ತೊಟ್ಟುಗಳು ತಮ್ಮ ಮುಟ್ಟಿನ ಅವಧಿಗೆ ಮುಂಚೆ ಅಥವಾ ಅಂಡೋತ್ಪತ್ತಿ ಸಮಯದಲ್ಲಿ ಕಪ್ಪಾಗುವುದನ್ನು ಗಮನಿಸುತ್ತಾರೆ. ಏಕೆಂದರೆ ಹಾರ್ಮೋನುಗಳು ಬದಲಾಗುತ್ತಿರುತ್ತವೆ.

ಸ್ತನದ ತೊಟ್ಟುಗಳ ಸುತ್ತಲೂ ಕೂದಲು:
ನಿಮ್ಮ ಸ್ತನದ ತೊಟ್ಟುಗಳು ಕಪ್ಪು ಬಣ್ಣದಲ್ಲಿ ಕಾಣುವಂತೆ ಮಾಡುವಂತಹ ಸ್ತನದ ತೊಟ್ಟುಗಳ ಸುತ್ತಲೂ ಕೆಲವು ಡಾರ್ಕ್ ಆದ ಕೂದಲನ್ನು ಹೊಂದಿರಬಹುದು ಎಂದು ತಿಳಿದರೆ ಕೆಲವೊಮ್ಮೆ ಆಶ್ಚರ್ಯವಾಗುತ್ತದೆ.

ವೈದ್ಯರನ್ನು ಯಾವಾಗ ನೋಡಬೇಕು?
ಸ್ತನದ ತೊಟ್ಟುಗಳು ಡಾರ್ಕ್ ಆದ ಕೂಡಲೇ ವೈದ್ಯರ ಹತ್ತಿರ ಹೋಗಬೇಕೆಂತಿಲ್ಲ. ನಿಮ್ಮ ಸ್ತನಗಳು ಮತ್ತು ಅರಿಯೊಲಾದಲ್ಲಿನ ಬದಲಾವಣೆಗಳು ಜೀವನದುದ್ದಕ್ಕೂ ಮತ್ತು ಪ್ರೌಢವಸ್ಥೆ ಅಥವಾ ಸ್ತನ್ಯಪಾನದಂತಹ ವಿವಿಧ ಸಂದರ್ಭಗಳಲ್ಲಿ ಸಾಮಾನ್ಯವಾಗಿದೆ. ಡಾರ್ಕ್ ಸ್ತನದ ತೊಟ್ಟುಗಳ ಜೊತೆಗೆ ಕೆಂಪಾಗುವುದು, ಗಡ್ಡೆಗಳು, ಊತ, ನೀರಿನ ಸ್ರವಿಸುವಿಕೆ ಮತ್ತು ಸ್ತನದ ಮೃದುತ್ವ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಇನ್ನು ನಿಮ್ಮ ವೈದ್ಯರೊಂದಿಗೆ ನೀವು ಅನುಭವಿಸುವ ಯಾವುದೇ ವ್ಯತ್ಯಾಸಗಳನ್ನು ಹಂಚಿಕೊಳ್ಳುವುದು ಒಳ್ಳೆಯದು.